Latest News ಸಿನಿಮಾ

ಅನುಷ್ಕಾ ಶೆಟ್ಟಿ ಮದುವೆ ಫಿಕ್ಸ್, ಇದೇ ವರ್ಷ ವಿವಾಹ

ಸೌತ್ ಇಂಡಿಯಾದ ಸ್ಟಾರ್ ನಟಿ, ಕನ್ನಡತಿ ಅನುಷ್ಕಾ ಶೆಟ್ಟಿಯ ಮದುವೆ ವಿಚಾರ ಆಗಿಂದಾಗೆ ಮುನ್ನಲೆಗೆ ಬರುತ್ತಲೇ ಇರುತ್ತೆ. ಆದರೆ ಬರಿ ವದಂತಿ ಎಂದು ಮತ್ತೆ ಮರೆಯಾಗ್ತಿತ್ತು. ಆದ್ರೀಗ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಜೋರಾಗಿ ಕೇಳಿ ಬರ್ತಿದೆ. ಮೂಲಗಳ ಪ್ರಕಾರ ಇದೇ ವರ್ಷ ಅನುಷ್ಕಾ ಶೆಟ್ಟಿ ಸಪ್ತಪದಿ ತುಳಿಯಲಿದ್ದಾರಂತೆ.

 

ತೆಲುಗು, ತಮಿಳು ಸಿನಿಮಾರಂಗದಲ್ಲಿ ದೊಡ್ಡ ಸ್ಟಾರ್ ಆಗಿ ಮೆರೆದಿರುವ ಅನುಷ್ಕಾ ಸದ್ಯ ಸಿನಿಮಾಗಳಿಂದ ಅಂತರ ಕಾಯ್ದು ಕೊಂಡಿದ್ದಾರೆ. ಅಪರೂಪಕ್ಕೆ ತೆರೆಮೇಲೆ ಮಿಂಚುತ್ತಿದ್ದ ಅನುಷ್ಕಾ ಅಭಿಮಾನಿಗಳಿಗೆ ದರ್ಶನ ನೀಡಿದೆ ಅನೇಕ ಸಮಯವೇ ಆಗಿದೆ. ಈ ನಡುವೆ ಇದೀಗ ಮದುವೆ ಸುದ್ದಿ ವೈರಲ್ ಆಗಿದೆ.

ಅನುಷ್ಕಾ ಕೈ ಹಿಡಿಯಲಿರೋ ಹುಡುಗ ಉದ್ಯಮಿಯಾಗಿದ್ದು, ಅನುಷ್ಕಾ ಶೆಟ್ಟಿ ಕುಟುಂಬಕ್ಕೆ ತುಂಬಾ ಆಪ್ತರು ಎನ್ನಲಾಗ್ತಿದೆ. ಈ ವಿಚಾರ ಅನುಷ್ಕಾ ಅಭಿಮಾನಿಗಳಲ್ಲಿ ಖುಷಿ ತಂದಿದೆ. ಆದರೆ ಪ್ರಭಾಸ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

 

ತೆರೆಮೇಲೆ ಅನುಷ್ಕಾ ಮತ್ತು ಪ್ರಭಾಸ್ ಜೊತೆ ಸೂಪರ್ ಸಕ್ಸಸ್ ಆಗಿತ್ತು. ತೆರೆಹಿಂದೆ ಕೂಡ ಇಬ್ಬರೂ ಉತ್ತಮ ಸ್ನೇಹಿತರು. ಹಾಗಾಗಿ ಮದುವೆಯಾಗಲಿದ್ದಾರೆ, ಮದುವೆ ಆದರೆ ತುಂಬಾ ಚೆನ್ನಾಗಿ ಇರಲಿದ್ದಾರೆ ಎನ್ನುವುದು ಅಭಿಮಾನಿಗಳ ಆಸೆ. ಹಾಗಾಗಿ ಪ್ರಭಾಸ್ ಜೊತೆಗಿನ ಮದುವೆ ವಿಚಾದ ಸುಳ್ಳಾಯ್ತಲ್ಲ ಅನ್ನೋ ಬೇಸರವೂ ಅಭಿಮಾನಿಗಳಲ್ಲಿದೆ‌‌‌‌‌.ಯಾವಾಗ ಮದುವೆ ಎಲ್ಲಿ ಎನ್ನುವ ಹೆಚ್ಚಿನ ವಿಚಾರ ಬಹಿರಂಗವಾಗಬೇಕಿದೆ ಅಷ್ಟೆ…

Leave a Reply

Your email address will not be published. Required fields are marked *