Latest News ವಿದೇಶ

ಇರಾನಿನ ಖ್ಯಾತ ಪರಮಾಣು ವಿಜ್ಞಾನಿಗಳನ್ನು ಮುಗಿಸಿದ ಇಸ್ರೇಲ್, ಇರಾನ್ ಮತ್ತಷ್ಟು ಕೊತಕೊತ

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಇದೀಗ ಇಸ್ರೇಲ್ ಪಡೆಗಳು ಇರಾನಿನ ಖ್ಯಾತ ವಿಜ್ಞಾನಿಗಳನ್ನು ಕೊಲೆಗೈದಿದ್ದಾರೆ. ಇಸ್ರೇಲ್ ಸೇನೆ ಹಾಗೂ ಇಸ್ರೇಲ್ ನ ಗುಪ್ತಚರ ಇಲಾಖೆಗಳು ನೀಡಿದ ಈ ದೊಡ್ಡ ಆಘಾತದಿಂದ ಇರಾನ್‌ ಮತ್ತಷ್ಟು ಕೊತಕೊತ ಕುದಿಯುವಂತೆ ಮಾಡಿದೆ.

 

ಇಸ್ರೇಲ್ ದಾಳಿಯಲ್ಲಿ ಇರಾನಿನ ಉನ್ನತ ಪರಮಾಣು ವಿಜ್ಞಾನಿಗಳು ಸಾವನ್ನಪ್ಪಿರುವ ಬಗ್ಗೆ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ, ದಾಳಿಯ ಸಮಯದಲ್ಲಿ ಸಾವನ್ನಪ್ಪಿದವರಲ್ಲಿಇರಾನಿನ ಹಲವಾರು ಪ್ರಮುಖ ವಿಜ್ಞಾನಿಗಳು ಸೇರಿದ್ದಾರೆ ಎಂದು ದೃಢಪಡಿಸಿದ್ದಾರೆ.

“ಪರಮಾಣು ಯೋಜನೆಯ ವಿಷಯದಲ್ಲೂ ನಾವು ಅದನ್ನೇ ಮಾಡಿದ್ದೇವೆ – ಇರಾನಿನ ವಿಜ್ಞಾನಿಗಳಿಗೆ ಮಾರಕ ಹೊಡೆತವೂ ಸೇರಿದಂತೆ. ನಮ್ಮನ್ನು ನಾಶಮಾಡುವ ಉದ್ದೇಶದಿಂದ ಪರಮಾಣು ಬಾಂಬ್‌ಗಳ ಅಭಿವೃದ್ಧಿಗೆ ಕಾರಣರಾದವರು ಅವರೇ. ಇನ್ನು ಮುಂದೆ ಅವರಿಲ್ಲ. ಇದೀಗ ಇನ್ನೂ ಕೆಲವನ್ನು ಹೊಡೆದುಹಾಕಿದ್ದೇವೆ” ಎಂದು ಇಸ್ರೇಲ್ ಪ್ರಧಾನಿ X ನಲ್ಲಿ ಪೋಸ್ಟ್‌ ಮಾಡಿದ್ದಾರೆ.

 

ಇದೆ ವೇಳೆ ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ವಿರುದ್ಧ ಸಹ ನೆತನ್ಯಾಹು ಕಿಡಿಕಾರಿದರು. ಅವರನ್ನು “ಕ್ರಾಂತಿಕಾರಿ ಗಾರ್ಡ್‌ಗಳ ಕೈಗೊಂಬೆ” ಎಂದು ಟೀಕಿಸಿದ್ದಾರೆ. ಜೊತೆಗೆ ಆ ನಾಯಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತಿಲ್ಲ ಎಂದು ಹೇಳಿದರು.

 

ಇರಾನ್‌ನ ಹೊಸ ಸರ್ವೋಚ್ಚ ನಾಯಕನಾಗಿ ಆಯ್ಕೆಯಾದಾಗಿನಿಂದ ಮೊಜ್ತಾಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹಾಗಾಗಿ ಯುದ್ಧದ ಸಮಯದಲ್ಲಿ ಅವರು ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳುತ್ತವೆ.

Leave a Reply

Your email address will not be published. Required fields are marked *