LPG ಸಿಲಿಂಡರ್ಗಳ ಅಭಾವ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಲೇ ಇದೆ. ಹೋಟೆಲ್, ಶಾಲೆ ಬಿಸಿಯೂಟ, ಪಿಜಿಗಳಬಳಿಕ ಈಗ ಸಿನಿಮಾರಂಗಕ್ಕೂ ಗ್ಯಾಸ್ ಬಿಸಿ ತಟ್ಟಿದೆ. ಶೂಟಿಂಗ್ ವೇಳೆ ಕೆಲಸ ಮಾಡುವ ಕಲಾವಿದರು, ತಂತ್ರಜ್ಞರಿಗೆ ಅಡುಗೆ ಮಾಡಲು ಗ್ಯಾಸ್ ಇಲ್ಲದೆ ಪರದಾಡುವಂತಾಗಿದೆ. ಹೌದು, ಶೂಟಿಂಗ್ಗೆ ಹೋಗಿದ್ದವರಿಗೆ ಅಡುಗೆ ಮಾಡಲು ಈಗ ಗ್ಯಾಸ್ ಅಭಾವ ಎದುರಾಗಿದೆ. ಎಲ್ಲೋ ನಡೆಯುತ್ತಿರುವ ಯುದ್ದದ ಬಿಸಿ ಕರ್ನಾಟಕಕ್ಕೆ ದೊಡ್ಡ ಸಂಕಷ್ಟವೊಡ್ಡಿದೆ.

ಯುದ್ಧದ ಪ್ರಯುಕ್ತ ಈಗಾಗಲೇ ದೊಡ್ಡ ದೊಡ್ಡ ಸಿನಿಮಾಗ ರಿಲೀಸ್ ಮುಂದಕ್ಕೆ ಹೋಗಿದೆ. ಯುದ್ಧದ ಪರಿಣಾಮ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿನಿಮಾ ರಿಲೀಸ್ ಕಷ್ಟಸಾಧ್ಯ. ಹಾಗಾಗಿ ಸಿನಿಮಾ ಬ್ಯುಸಿನೆಸ್ ಮೇಲೆ ದೊಡ್ಡ ಪರಿಣಾಮ ಬೀರುವ ಕಾರಣ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳು ಮುಂದಕ್ಕೆ ಹೋಗಿವೆ. ಈ ನಡವೆ ಈಗ ಸಿನಿಮಾ ಶೂಟಿಂಗ್ ಗಳ ಮೇಲೂ ಪರಿಣಾಮ ಬೀರಿರುವುದು ನಿಜಕ್ಕೂ ಸಂಕಷ್ಟಕರ ಪರಿಸ್ಥಿತಿಯಾಗಿದೆ.
ದೂರ ದೂರದ ಊರುಗಳಲ್ಲಿ ನಡೆಯುತ್ತಿರುವ ಶೂಟಿಂಗ್ಗಳನ್ನು ರದ್ದು ಮಾಡಿ ವಾಪಾಸ್ ಬರಲು ಅನೇಕ ಸಿನಿಮಾತಂಡಗಳು ನಿರ್ಧರಿಸಿವೆ ಎನ್ನುವ ಮಾಹಿತಿ ತಿಳಿದುಬಂದಿದೆ. ಬೇರೆ ಬೇರೆ ಕಡೆ ಶೂಟಿಂಗ್ ಮಾಡುವವರಿಗೆ ಗ್ಯಾಸ್ ಬದು ಪರ್ಯಾಯ ವ್ಯವಸ್ಥೆ ಕಷ್ಟಕರವಾಗಿದೆ. ಸೌದೆ ಒಲೆ ಅಥವಾ ಎಲೆಕ್ಟ್ರಿಕ್ಟ್ ಸ್ಟೌಗಳನ್ನು ಬಳಸಲು ಸಾಧ್ಯವಿಲ್ಲ, ಹಾಗಾಗಿ ಶೂಟಿಂಗ್ ಬಂದ್ ಮಾಡುವುದೊಂದೆ ದಾರಿಯಾಗಿದೆ. ಮಧ್ಯಪ್ರಾಚ್ಯದ ಯುದ್ಧದಿಂದ ಕರ್ನಾಟಕದ ಮನರಂಜನ ಕ್ಷೇತ್ರದ ಮೇಲು ದೊಡ್ಡ ಹೊಡೆದ ಬೀಳುವ ಸಾಧ್ಯತೆ ಇದೆ.

ಈಗಾಗಲೇ ಬೆಂಗಳೂರಿನ ಕೆಲ ಪೇಯಿಂಗ್ ಗೆಸ್ಟ್ಗಳು ಮಧ್ಯಾಹ್ನದ ಅಡುಗೆಯನ್ನು ಸ್ಥಗಿತಗೊಳಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಸಮಸ್ಯೆ ಬಗೆಹರಿಯುವವರೆಗೂ ಊಟ ನೀಡದಿರಲು ನಿರ್ಧರಿಸಲಾಗಿದೆ ಎಂದು ಪಿಜಿ ಮಾಲೀಕರು ಘೋಷಿಸಿದ್ದಾರೆ. ಎಲೆಕ್ಟ್ರಿಕ್ ಸ್ಟವ್ ಅಥವಾ ಸೌದೆ ಬಳಕೆಯಂತಹ ಪರ್ಯಾಯ ವ್ಯವಸ್ಥೆಗಳನ್ನು ಜಾರಿಗೊಳಿಸುವುದು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.
ಇನ್ನು ಹೋಟೆಲ್ಗ ಸ್ಥಿತಿಯಂತೂ ಕೇಳತೀರದಾಗಿದೆ. ಹೋಟೆಲ್ಗಳು ಬಂದ್ ಆಗಿರುವುದರುಂದ ಹೊರಗಡೆ ಊಟ ಸಿಗುವುದು ಕಷ್ಟಕರವಾಗಿದೆ. ಇನ್ನೂ ಗೃಹಬಳಕೆಯ ಸಿಲಿಂಡರ್ಗಳ ಪೂರೈಕೆಗೆ ಕೇಂದ್ರದಿಂದ ಸೂಚನೆಗಳು ಬಂದಿದ್ದು, ಅವುಗಳು ತಕ್ಕಮಟ್ಟಿಗೆ ಲಭ್ಯವಿವೆ. ತಿಂಗಳಿಗೆ ಒಂದು ಸಿಲಿಂಡರ್ ದೊರೆಯುತ್ತಿರುವುದು ಮನೆಗಳಲ್ಲಿರುವವರಿಗೆ ಸ್ವಲ್ಪ ಸಮಾಧಾನಕರ ಸಂಗತಿ. ಆದರೆ, ವಾಣಿಜ್ಯ ಸಿಲಿಂಡರ್ಗಳ ಸಮಸ್ಯೆಗೆ ಪರಿಹಾರ ಸಿಗದಂತೆ ಆಗಿದೆ.
ಇನ್ನು ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಮಕ್ಕಳಿಗೆ ಆಹಾರ ತಯಾರಿಸಲು ತಿಂಗಳಿಗೆ ಹಲವು ಸಿಲಿಂಡರ್ಗಳು ಬೇಕಾಗುತ್ತವೆ. ಒಂದು ಸಿಲಿಂಡರ್ನಲ್ಲಿ ದೊಡ್ಡ ಪ್ರಮಾಣದ ಅಡುಗೆ ತಯಾರಿಸುವುದು ಕಷ್ಟಕರ ಎಂದು ಅಡುಗೆ ಸಿಬ್ಬಂದಿ ಹೇಳುತ್ತಿದ್ದಾರೆ. ಗ್ಯಾಸ್ ಸಿಲಿಂಡರ್ಗಳ ಕೊರತೆ ಅನೇಕ ಹೋಟೆಲ್ ಮಾತ್ರವಲ್ಲದೆ ನಿಧಾನಕ್ಕೆ ಎಲ್ಲ ಕ್ಷೇತ್ರಗಳ ಮೇಲು ಪರಿಣಾಮ ಬೀರುತ್ತಿದೆ. ಸದ್ಯಕಂತೂ ಯುದ್ಧ ಮಗಿಯುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಗ್ಯಾಸ್ ಸಿಲಿಂಡರ್ ಮೇಲೆ ಅವಲಂಬಿತರಗಿರುವವರ ಕಥೆ ಕಷ್ಟಕರವಾಗಿದೆ.
