ನಟಿ ರಶ್ಮಿಕಾ ಮಂದಣ್ಣ ಮದುವೆಯಾಗಿ ಸೆಟ್ಲ್ ಆದರೂ ವಿವಾದಗಳು ಮುಗಿಯ ಹಾಗೆ ಕಾಣುತ್ತಿಲ್ಲ. ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ನಟ ವಿಜಯ್ ದೇವರಕೊಂಡ ಅವರ ಜೊತೆ ಅದ್ದೂರಿಯಾಗಿ ಹಸೆಮಣೆ ಏರದ ಬೆನ್ನಲ್ಲೇ ಮಾಜಿ ಲವರ್ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್‌ನ ಅಸಲು ಸುದ್ದಿ ಬಹಿರಂಗವಾಗಿದೆ. ರಶ್ಮಿಕಾ ಮಂದಣ್ಣ ಅವರ ತಾಯಿ ಮಾತನಾಡಿರುವ ಆಡಿಯೋ ಇದೀಗ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿಆಡಿಯೋ ವೈರಲ್ ಆಗುತ್ತಿದ್ದಂತೆ ನಟಿ ರಶ್ಮಿಕಾ ಸಿಡಿದೆದ್ದಿದ್ದಾರೆ. ಇನ್ಸಾಗ್ರಾಮ್ ನಲ್ಲಿ ಪೋಸ್ಟ್ ಶೇರ್ ಮಾಡುವ ಮಲಕ ರಶ್ಮಿಕಾ ವೈರಲ್ ಆಡಿಯೋ ವಿಚಾರಕ್ಕೆ ಮೌನ ಮುರಿದ್ದಾರೆ.

ಇದುವರೆಗೂ ನನಗೆ ತುಂಬಾ ನೋವು ಕೊಟ್ಟಿದ್ದೀರಿ ಆದರೂ ನಾನು ತುಂಬಾ ತಾಳ್ಮೆಯಿಂದ ಇದ್ದೆ, ಸೈಲೆಂಟ್ ಆಗಿದ್ದೆ. ಆದರೀಗ ಹಳೆಯ 8 ವರ್ಷಗಳ ಹಿಂದಿನ ವೈಯಕ್ತಿಕ ಮಾತುಕತೆಯನ್ನು ರೆಕಾರ್ಡ್ ಮಾಡಿ ಹರಿಬಿಡಲಾಗಿದೆ. ನಮ್ಮ ಅನುಮತಿ ಇಲ್ಲದೆ ಆಡಿಯೋದ ಒಂದಿಷ್ಟು ತುಣುಕನ್ನು ವೈರಲ್ ಮಾಡಲಾಗುತ್ತಿದೆ. ಜೀವನದಲ್ಲಿ ನಾವು ತುಂಬಾ ಮುಂದೆ ಬಂದಿದ್ದೇವೆ. ತುಂಬಾ ಎತ್ತರಕ್ಕೆ ಬೆಳೆದಿದ್ದೇವೆ, ಅರ್ಥಪೂರ್ಣವಾದ ಕೆಲಸಗಳನ್ನು ಮಾಡುತ್ತಿದ್ದೇವೆ, ಸಕಾರಾತ್ಮಕತೆಯನ್ನು ಹರಡುತ್ತಿದ್ದೇವೆ. ಆದರೆ ಕೆಲವರು ದ್ವೇಷ, ವಿವಾದಗಳನ್ನು ಮಾಡುತ್ತಿದ್ದಾರೆ. ಇನ್ನೊಬ್ಬರ ಜೀವನದ ನೆಮ್ಮದಿ ಹಾಳುಮಾಡುತ್ತಿದ್ದಾರೆ.
8 ವರ್ಷಗಳ ಹಿಂದೆ ನನ್ನ ವಿರುದ್ಧ ಮುಗಿಬಿದ್ದಿದ್ದರು. ಆದರೆ ಆಗ ನಾನು ಸೈಲೆಂಟ್ ಆಗಿದ್ದೆ. ಈಗ ಸೈಲೆಂಟ್ ಆಗಿರಲು ಸಾಧ್ಯವಿಲ್ಲ. ನಾನು ಎಲ್ಲಾ ಮಾಧ್ಯಮ, ಇನ್ಫ್ಲೂಯನ್ಸರ್ಸ್ ಅಥವಾ ಯಾರ್ಯಾರು ಈ ಆಡಿಯೋವನ್ನು ಹರಿಬಿಡುತ್ತಿದ್ದೀರಾ ಆದಷ್ಟು ಬೇಗ ತೆಗೆದುಹಾಕಿ, 24 ಗಂಟೆ ಸಮಯಾವಕಾಶವಿದೆ. ಇಲ್ಲ ಅಂದ್ರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ. ಈ ಹೆಜ್ಜೆಯನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ, ಆದರೆ ಇದು ಅನಿವಾರ್ಯವಾಗಿದೆ” ಎಂದು ರಶ್ಮಿಕಾ ಎಚ್ಚರಿಕೆ ನೀಡಿದ್ದಾರೆ.
