ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್.. ಕನ್ನಡದ ಜನಪ್ರಿಯ ಡ್ಯಾನ್ಸ್ ಶೋಗಳಲ್ಲಿ ಒಂದಾಗಿದೆ. ಯಶಸ್ವಿಯಾಗಿ ಈ ಬಾರಿಯ ಸೀಸನ್ ಸಾಗುತ್ತಿದೆ.. ಇದಕ್ಕೆ ಸ್ಫರ್ಧಿಗಳ ಜೊತೆಗೆ ಜಡ್ಜಸ್ ಕೂಡ ಕಾರ. ಈ ಶೋನ ಮೇಜರ್ ಹೈಲೈಟ್ ಅಂದ್ರೆ ಶಿವಣ್ಣ.. ಶಿವಣ್ಣ ಈ ಶೋನ ಜಡ್ಜ್ ಆಗಿದ್ದು, ಎಲ್ಲರಿಗೂ ಅಚ್ಚುಮೆಚ್ಚಿನ ತೀರ್ಪುಗಾರರಾಗಿದ್ದಾರೆ..

ಈ ಮಧ್ಯೆ ಶಿವಣ್ಣ ಡಿಕೆಡಿ ತಂಡವನ್ನು ಡಾ.ರಾಜಕುಮಾರ್ ಹುಟ್ಟೂರಾದ ಗಾಜನೂರಿಗೆ ಕರೆದುಕೊಡು ಹೋಗಿದ್ದಾರೆ. ಹೌದು ಶಿವಣ್ಣ ಡಿಕೆಡಿ ಟೀಂ ಜೊತೆ ಗಾಜನೂರಿಗೆ ಭೇಟಿ ಕೊಟ್ಟಿದ್ದಾರೆ.

ಶಿವಣ್ಣ ಮತ್ತು ಗೀತಕ್ಕ ದಂಪತಿ ಡಿಕೆಡಿ ಸ್ಪರ್ಧಿಗಳ ಜೊತೆಗೆ ಗಾಜನೂರಿನಲ್ಲಿ ಸಮಯ ಕಳೆದಿದ್ದಾರೆ.. ಆ ಸುಂದರ ಫೋಟೊಗಳು ಎಲ್ಲರ ಗಮನ ಸೆಳೆಯುತ್ತಿವೆ.

