ನಟಿ ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಮದುವೆ ಮುಗಿದು ವಾರ ಕಳೆದಿಲ್ಲ.. ಅದಾಗಲೇ ರಶ್ಮಿಕಾಳ ಹಳೆ ಲವ್ ಸ್ಟೋರಿಯ ಕರಾಳ ಆಡಿಯೋವೊಂದು ತಲ್ಲಣ ಎಬ್ಬಿಸಿದೆ.. ಅಷ್ಟಕ್ಕೂ ಆ ಆಡಿಯೋದಲ್ಲಿರೋದು ರಶ್ಮಿಕಾ ತಾಯಿಯ ಆಡಿಯೋ ..
ರಶ್ಮಿಕಾ ತಾಯಿಯ ಸಂಭಾಷಣೆಯ ಆಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ಈ ವೀಡಿಯೋದಲ್ಲಿ ನಿಜವಾದ ಹೆಸರುಗಳನ್ನು ಬಳಸದಿದ್ರೂ.. ರಶ್ಮಿಕಾ – ರಕ್ಷಿತ್ ಶೆಟ್ಟಿ ನಡುವಿನ ಸಂಬಂಧ ಕಿತ್ತು ಹೋಗಿದ್ಯಾಕೆ..? ಇಬ್ಬರ ನಡುವಿನ ಮನಸ್ತಾಪಕ್ಕೆ ಕಾರಣ ಯಾರು..? ಈ ಮನಸ್ತಾಪದಲ್ಲಿ ರಿಯಲ್ ವಿಲನ್ ಯಾರು..? ಎನ್ನವುದು ರಿವೀಲ್ ಆಗಿದೆ..

ಹೊರ ಜಗತ್ತಿನ ಪಾಲಿಗೆ ರಶ್ಮಿಕಾ – ರಕ್ಷಿತ್ ಸಂಬಂಧ ಅಳಸೋಕೆ ರಶ್ಮಿಕಾನೇ ಕಾರಣ ಅನ್ನೋ ವಿಚಾರವಾಗಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.. ಇದೆಷ್ಟು ಸತ್ಯ – ಸುಳ್ಳು ಅನ್ನೋ ಪರಾಮರ್ಶೆಯನ್ನೂ ಮಾಡದೇ ಏಕಾಏಕಿ ರಶ್ಮಿಕಾ ವಿರುದ್ಧ ನೆಗೆಟಿವ್ ಕಾಮೆಂಟ್, ಟ್ರೋಲ್ಗಳ ಅಬ್ಬರ ನಡೆದಿತ್ತು.. ಅದ್ಯಾವ ಮಟ್ಟಿಗೆ ಅಂದ್ರೆ ಆಕೆ ಒಬ್ಬ ಹೆಣ್ಣು ಮಗಳು, ಅವಳಿಗೂ ವೈಯಕ್ತಿಕ ಬದುಕಿನ ಸ್ವಾತಂತ್ರ್ಯವಿದೆ ಅನ್ನೋದನ್ನೂ ಅಲ್ಪ ಜ್ಞಾನವೂ ಇಲ್ಲದೇ.. ಬೇಕಾಬಿಟ್ಟಿ ಅಪಪ್ರಚಾರ ನಡೆದಿತ್ತು.. ಇಷ್ಟಾದರೂ ರಶ್ಮಿಕಾ ಮಂದಣ್ಣ ಮೌನ ಮುರಿದಿರಲಿಲ್ಲ.. ಎಲ್ಲೂ ರಕ್ಷಿತ್ ಶೆಟ್ಟಿ ಸಂಬಂಧದ ಬಗ್ಗೆ ಕೆಟ್ಟದಾಗಿ ಮಾತನಾಡಿರಲಿಲ್ಲ.. ಆದ್ರೀಗ ರಶ್ಮಿಕಾ ತಾಯಿಯ ಸಂಭಾಷಣೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಒಬ್ಬರ ಸಂಬಂಧ ಹಳಸೋಕೆ ಕಾರಣ ಯಾರು ಅನ್ನೋದರ ಕಹಿ ಸತ್ಯ ಹೇಳಲಾಗಿದೆ..
ವೈರಲ್ ಆಗುತ್ತಿರುವ ಆಡಿಯೋ ಕ್ಲಿಪ್ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಅವರದ್ದು ಎನ್ನಲಾಗುತ್ತಿದೆ. ಮುಖ್ಯವಾಗಿ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಕೆಲವು ವಿಷಯಗಳನ್ನ ಚರ್ಚಿಸಲಾಗಿದೆ.

ವೈರಲ್ ಆಡಿಯೋದಲ್ಲಿ ಏನಿದೆ?
‘ಒಳಗಡೆ ತುಂಬಾ ನಡೆದಿದೆ. ನಾನು ಸ್ಟ್ರಾಂಗ್ ಆಗಿರೋದಕ್ಕೆ ಬಚಾವ್. ನಮ್ಮ ಹುಡುಗಿ ಹೇಗೆ ಬೆಳಿತಿದ್ದಾಳೆ ಅಂತ ಖುಷಿ ಪಡಬೇಕು. ಏನು ವಿಷ್ಯ ಇದ್ರು ಇವನು ತಲೆ ಹಾಕೋದು ಯಾಕೆ. ನಾನು ಯಾವ ಗ್ಯಾರೆಂಟಿಯಲ್ಲಿ ಮದುವೆ ಮಾಡಿಕೊಡಲಿ ಇವರಿಗೆ? 21 ವರ್ಷದ ಹುಡುಗಿಯನ್ನ 35 ವರ್ಷ ಹುಡುಗನಿಗೆ ಮದುವೆ ಮಾಡಿ ಕೊಡಲು ಒಪ್ಪಿದ್ದೆ ನನ್ನ ದೊಡ್ಡತನ. ಆವತ್ತು ಒಂದಿನ 2 ಗಂಟೆಗೆ ರಶ್ಮಿಕಾ ಸಿನಿಮಾ ಕುರಿತ ಇಂಟರ್ವ್ಯೂ ಮುಗಿದಿದೆ. ನೀನು ಕಾರು ತಗೊಂಡು ಬಾ ರಕ್ಷಿತ್ನ ನೋಡೋಕೆ ಅಂತ ಹೇಳ್ತಿದ್ದಾರೆ. ಇವರು ಮನುಷ್ಯರಾ ಇವರು? ನನ್ನ ಮಗಳಿಗೆ ಏನಾದರೂ ತೊಂದರೆಯಾದ್ರೆ ಯಾರು ಹೊಣೆ? ಆಗ ರಶ್ಮಿಕಾ ಹೇಳಿದ್ಲು ನಾನು ಬರೋದಕ್ಕೆ ಆಗಲ್ಲ, ನನಗೆ ಇವತ್ತಿನ ದಿನ ಇಂಟರ್ವ್ಯೂ ತುಂಬಾ ಇಂಪಾರ್ಟೆಂಟ್ ಅಂತ” ಎಂದು ಆಡಿಯೋದಲ್ಲಿ ಉಲ್ಲೇಖಿಸಲಾಗಿದೆ.
“ನೀನು ಎಲ್ಲವನ್ನೂ ಬಿಟ್ಟು ಬಂದು ಟ್ವೀಟ್ ಮಾಡಬೇಕು, ನೀನು ಇನ್ಮುಂದೆ ಯಾವ ಸಿನಿಮಾನೂ ಮಾಡಲ್ಲ ಅಂತ ಹೇಳ್ಬೇಕು ಅಂತ ರಶ್ಮಿಕಾಗೆ ಹೇಳಿದ್ರು. ಅವರ ಅಮ್ಮ ಬಂದು ನಿನ್ನ ಅಮ್ಮ ನನಗೆ ಸಾರಿ ಕೇಳ್ಬೇಕು ಅಂತ ಹೇಳಿದ್ರು. ಹುಡುಗ ಹುಡುಗಿಯನ್ನ ಒಂದು ಮಾಡೋದಾ? ಅಥವಾ ಅವರನ್ನ ದೂರ ಮಾಡೋದಾ? ಸಂಬಂಧ ಒಡೆದದ್ದು ನನ್ನ ಪುಣ್ಯ, ಅದು ಬೇರೆ ವಿಷಯ” ಎಂದು ರಕ್ಷಿತ್ ಶೆಟ್ಟಿ ತಾಯಿ ಬಗ್ಗೆಯೂ ಆವೇಶದ ಮಾತುಗಳನ್ನಾಡಿದ್ದಾರೆ ರಶ್ಮಿಕಾ ತಾಯಿ
