Latest News ಸಿನಿಮಾ

‘ಶ್ರೀ ಗಂಧದ ಗುಡಿ’ ಧಾರಾವಾಹಿಯಿಂದ ನಾಯಕಿ ಸಂಜನಾ ಬುರ್ಲಿ ಔಟ್, ಕಾರಣವೇನು?

‘ಶ್ರೀ ಗಂಧದ ಗುಡಿ’ ಧಾರಾವಾಹಿಯಿಂದ ನಾಯಕಿ ಸಂಜನಾ ಬುರ್ಲಿ ಹೊರನಡೆದಿದ್ದಾರೆ. ನಟಿ ಸಂಜನಾ ಈ ಹಿಂದೆಯೂ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಿಂದ ಅರ್ಧಕ್ಕೆ ಹೊರನಡೆದು ಶಾಕ್ ಕೊಟ್ಟಿದ್ದರು. ಆ ಬಳಿಕ ‘ಶ್ರೀ ಗಂಧದ ಗುಡಿ’ ಧಾರಾವಾಹಿಯ ನಾಯಕಿ ಪಾತ್ರಕ್ಕೆ ಎಂಟ್ರಿ ಕೊಟ್ಟಿದ್ದರು. ಇದೀಗ ಈ ಸೀರಿಯಲ್ ನಿಂದನೂ ಹೊರ ನಡೆದಿದ್ದಾರೆ. ಇದು ಕಿರುತೆರೆ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಆದರೆ ಈ ಧಾರಾವಾಹಿಯ ಕಥೆ ಏನು ಎಂಬ ಆತಂಕ ಕೂಡ ಅಭಿಮಾನಿಗಳಲ್ಲಿತ್ತು ಇತ್ತು. ಅದಕ್ಕೂ ಉತ್ತರ ಸಿಕ್ಕಿದೆ.

 

‘ಶ್ರೀ ಗಂಧದ ಗುಡಿ’ ಧಾರಾವಾಹಿ ಪ್ರಾರಂಭವಾಗಿ ಬಹಳ ಸಮಯವಾಗಿಲ್ಲ. ಇದು ತಮಿಳು ಸೀರಿಯಲ್‌ನ ರಿಮೇಕ್. ಈ ಸೀರಿಯಲ್ನಲ್ಲಿ ಶಿಶಿರ್, ಸಂಜನಾ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಕೆಲವೇ ಸಮಯದಲ್ಲಿಈ ಸೀರಿಯಲ್ ವೀಕ್ಷಕರ ಮನ ಗೆದ್ದಿತ್ತು. ಒಳ್ಳೆಯ ರೇಟಿಂಗ್ ಕೂಡ ಪಡೆಯುತ್ತಿದೆ. ಆದರೆ, ಧಾರಾವಾಹಿಯಲ್ಲಿ ಈಗ ನಡೆದ ಹೊಸ ಬೆಳವಣಿಗೆಯಿಂದ ವೀಕ್ಷಕರು ಬೇಸರಗೊಂಡಿದ್ದಾರೆ.

 

ಶಿಕ್ಷಣದ ಕಾರಣ ನೀಡಿ ಸಂಜನಾ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಿಟ್ಟರು. ಈಗ ಸಂಜನಾ ಮದುವೆ ಕಾರಣ ನೀಡಿ, ‘ಶ್ರೀ ಗಂಧದ ಗುಡಿ’ ಧಾರಾವಾಹಿ ತೊರೆದಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಈ ಜಾಗಕ್ಕೆ ಹೊಸ ಪಾತ್ರಧಾರಿಯ ಆಯ್ಕೆ ಕೂಡ ಆಗಿದೆ.

 

ಇನ್ಮುಂದೆ ಸಂಜನಾ ಜಾಗದಲ್ಲಿ ನಟಿ ಸ್ನೇಹಾ ಮಂಜುನಾಥ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸ್ನೇಹಾ ‘ಶುಭಸ್ಯ ಶೀಘ್ರಂ’ ಸೀರಿಯಲ್ನಲ್ಲಿ ಸ್ನೇಹಾ ನಟಿಸುತ್ತಿದ್ದರು. ಈ ಧಾರಾವಾಹಿ ಸದ್ಯ ಪ್ರಸಾರ ನಿಲ್ಲಿಸಿದೆ. ಈಗ ಸ್ನೇಹಾ ‘ಶ್ರೀ ಗಂಧದ ಗುಡಿ’ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

Leave a Reply

Your email address will not be published. Required fields are marked *