ಮದುವೆ ಗಾಸಿಪ್ ನಡುವೆಯೂ ಮೃಣಾಲ್‌ಗೆ ಧನುಷ್ ಸಿನಿಮಾ

ತಮಿಳಿನ ಖ್ಯಾತ ನಟ ಧನುಷ್ ಮತ್ತು ಬಹುಭಾಷ ನಟಿ ಮೃಣಾಲ್ ಠಾಕೂರ್ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇಬ್ಬರೂ ಸಧ್ಯದಲ್ಲೆ ಮದುವೆ ಸಹ ಆಗುತ್ತಿದ್ದಾರೆ ಎನ್ನಲಾಗಿತ್ತು. ಒಂದಷ್ಟು ದಿನ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರ ಮದುವೆಯದ್ದೆ ಸುದ್ದಿ ಆದರೆ ಈ ಬಗ್ಗೆ ಧನುಷ್ ಆಗಲಿ ಅಥವ ಮೃಣಾಲ್ ಆಗಲಿ ಎಲ್ಲಿಯೂ ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಾಗಿ ಇಬ್ಬರ ಸೈಲೆಂಟ್ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು.

ಈ ಮದುವೆ, ಡೇಟಿಂಗ್ ಸುದ್ದಿಯ ಮಧ್ಯೆ ಮತ್ತೊಂದು ವಿಚಾರ ಎಲ್ಲರ ಹುಬ್ಬೇರಿಸಿದೆ. ಧನುಷ್ ಹೊಸ ಸಿನಿಮಾಗೆ ಮೃಣಾಲ್ ನಾಯಕಿ ಎನ್ನಲಾಗುತ್ತಿದೆ. ಹೌದು, ಧನುಷ್ ನಿರ್ದೇಶನದ ಹೊಸ ಸಿನಿಮಾಗೆ ಮೃಣಾಲ್ ನನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ಧನುಷ್.ಇದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮೂಲಗಳ ಪ್ರಕಾರ ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, 60 – 70ರ ದಶಕದ ಕಥೆಯಂತೆ. ಈ ಸಿನಿಮಾಗೆ ಮೃಣಾಲ್ ಪಕ್ಕಾ ಸೂಟ್ ಆಗ್ತಾರೆ ಎಂದು ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಧನುಷ್. ಇಷ್ಟರಲ್ಲೇ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಧನುಷ್ ಮತ್ತು ಮೃಣಾಲ್ ಒಟ್ಟಿಗೆ ಕೆಲಸ ಮಾಡಲಿದ್ದಾರೆ.

Leave a Reply

Your email address will not be published. Required fields are marked *