ಕ್ಯಾನ್ಸ್ ಚಿತ್ರೋತ್ಸವದಲ್ಲಿ ಭಾರತದ ಅತ್ಯಂತ ಕಿರಿಯ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರ ‘ಸೆಪ್ಟೆಂಬರ್ 21’

22 ವರ್ಷದ ಭಾರತೀಯ ಕಿರಿಯ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಸೆಪ್ಟೆಂಬರ್ 21 ಮಾರ್ಶೆ ಡು ಫಿಲ್ಮ್‌ನಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಾಣುತ್ತಿದೆ. 22 ವರ್ಷದ ಸುವರ್ಣ, ಕ್ಯಾನ್ಸ್‌ನಲ್ಲಿ ಪಾದಾರ್ಪಣೆ ಮಾಡುತ್ತಿರುವ ಅತ್ಯಂತ ಕಿರಿಯ ಭಾರತೀಯ ನಿರ್ದೇಶಕಿಯರಲ್ಲಿ ಒಬ್ಬರು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೆಸ್ಟಿವಲ್ ಡಿ ಕ್ಯಾನ್ಸ್ 2026ರ ಮಾರ್ಶೆ ಡು ಫಿಲ್ಮ್ ವಿಭಾಗದಲ್ಲಿ ಮೇ 16, 2026ರಂದು ಸಂಜೆ 5:45ಕ್ಕೆ ಪಲೈಸ್ ಥಿಯೇಟರ್‌ನಲ್ಲಿ ವಿಶ್ವ ಪ್ರೀಮಿಯರ್ ಕಾಣಲಿದೆ.

ಹಿಂದಿ ಮತ್ತು ಕನ್ನಡದಲ್ಲಿ ಚಿತ್ರೀಕರಿಸಲಾದ ಈ ಚಿತ್ರ, ಆಲ್ಝೈಮರ್ ಕಾಯಿಲೆಯ ಹಿನ್ನೆಲೆಯಲ್ಲಿ ತಂದೆ-ಮಗನ ಬಿರುಕು ಬಿಟ್ಟ ಸಂಬಂಧವನ್ನು ಕೇಂದ್ರವಾಗಿರಿಸಿಕೊಂಡಿದೆ. ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ತಂದೆ, ತನ್ನ ಹೆಂಡತಿ ಕೋವಿಡ್-19 ಕಾರಣದಿಂದ ಪಕ್ಕದ ಕೋಣೆಯಲ್ಲಿ ಕ್ವಾರಂಟೈನ್‌ನಲ್ಲಿರುತ್ತಾರೆ. ದೂರವಾಗಿದ್ದ ಮಗ ಮನೆಗೆ ಹಿಂತಿರುಗಿದಾಗ, ತನ್ನ ವೈಯಕ್ತಿಕ ಮಹತ್ವಾಕಾಂಕ್ಷೆ ಮತ್ತು ತಂದೆಯ ಮೇಲಿನ ಕರ್ತವ್ಯದ ನಡುವೆ ಆಯ್ಕೆ ಮಾಡಬೇಕಾಗುತ್ತದೆ.

ಈ ಬಗ್ಗೆ ಮಾತನಾಡಿದ ನಿರ್ದೇಶಕ ಸುವರ್ಣ “ಆಲ್ಝೈಮರ್ ರೋಗಿಗಳಿಗಿಂತ ಅವರನ್ನು ನೋಡಿಕೊಳ್ಳುವವರ ಸಂಕಷ್ಟ ಬಹಳ ದೊಡ್ಡದು,” ಎನ್ನುತ್ತಾರೆ.

ಪ್ರವೀಣ್ ಸಿಂಗ್ ಸಿಸೋಡಿಯಾ ಆಲ್ಝೈಮರ್ ರೋಗಿಯ ಪಾತ್ರದಲ್ಲಿ ಮೌನದಲ್ಲೇ ನೋವನ್ನು ಕಟ್ಟಿಕೊಟ್ಟಿದ್ದಾರೆ. ವಿಶೇಷ ಎಂದರೆ ಕನ್ನಡದ ನಟಿ ಪ್ರಿಯಾಂಕಾ ಉಪೇಂದ್ರ ನಟಿಸಿದ್ದಾರೆ. ಜರೀನಾ ವಹಾಬ್, ಅಜಿತ್ ಶಿಧಯೆ, ಮತ್ತು ಅಮಿತ್ ಬೆಹ್ಲ್ ಇದ್ದಾರೆ.
ಚಿತ್ರಕ್ಕೆ ರಾಜಶೇಖರ್ ಕಥೆ-ಚಿತ್ರಕಥೆ ಬರೆದಿದ್ದು, ವಿನಯ್ ಚಂದ್ರಾ ಸಂಗೀತ ಸಂಯೋಜಿಸಿದ್ದಾರೆ.

Leave a Reply

Your email address will not be published. Required fields are marked *