ಊರು ಬಿಟ್ಟು ಕೊಲ್ಹಾಪುರ, ಸೊಲ್ಲಾಪುರ, ಕಾಶಿ ಹೀಗೆ, ಎಲ್ಲಾ ಕಡೆ ಓಡಾಡಿದೆ. ಇಂಜಿನಿಯರಿಂಗ್ ಓದಿದ್ದರಿಂದ ಸಿಕ್ಕಿದ ಕಡೆಯಲ್ಲಿ ಕೆಲಸ ಮಾಡ್ತಿದ್ದೆ. ಈ ಮಧ್ಯೆ ನನ್ನ ಹೆಂಡತಿಗೆ ಪತ್ರ ಬರೆದೆ. ಅಪ್ಪ ಅಮ್ಮನಿಗೂ ಪತ್ರ ಬರೆದು ಬದುಕಿದ್ದೀನಿ ಬರ್ತೀನಿ ಅಂತಾ. ಸುಮಾರು 7 ವರ್ಷಗಳ ಕಾಲ ನನಗೆ ಸಾಡೆ ಸಾಥ್. ಈ ವಿಚಾರ ನನಗೆ ಸ್ವಾಮೀಜಿ ಹೇಳಿದ್ರು.
ಈ ಮಧ್ಯೇ ನೇಪಾಳದಲ್ಲಿ ನನ್ನ ಗೆಳೆಯ ಇದ್ದ, ಅವನ ರೆಸಾರ್ಟ್ನಲ್ಲಿ ನಾನು ಕೆಲಸ ಮಾಡ್ತಿದ್ದೆ. ನನ್ನ ಗೆಳೆಯ ಪ್ರವೀಣ್ ಮೂಲಕ ಗದಗದಲ್ಲಿ ಏನ್ ನಡೀತಿದೆ ಅಂತಾ ತಿಳಿದುಕೊಳ್ತಿದ್ದೆ. ಆತನ ಸಾವಿಗೂ ನಾನು ಬರೋಕೆ ಆಗಲಿಲ್ಲ. ನನ್ನ ತಂದೆ – ತಾಯಿ, ಅಜ್ಜಿ ಸತ್ತಾಗಲೂ ನಾನು ಬರೋಕೆ ಆಗಲಿಲ್ಲ.
ಒಂದು ಹಿಡಿ ಮಣ್ಣು ಹಾಕೋಕು ಆಗಲಿಲ್ಲ. ಇದೆಲ್ಲವೂ ನನ್ನ ಕಾಡೋಕೆ ಶುರು ಮಾಡಿತ್ತು. ಮತ್ತೆ ನಾನು ವಾಪಸ್ ಬರಬೇಕು. ಅಂತಾ ನನಗೆ ಅನ್ನಿಸ್ತು. ಈ ಮಧ್ಯೆ ದರ್ಶನ್ ಅವರ ಪ್ರಕರಣದ ಬಗ್ಗೆ ಸುದ್ದಿ ನೋಡಿದೆ. ನನ್ನ ಹೆಸರು ಕೇಳಿ ಬಂದಿತ್ತು. ಆ ಬರೋಣ ಅಂದರೆ ನನಗೆ ಕಿಡ್ನಿ ಸಮಸ್ಯೆ, ಥ್ರೋಟ್ ಸಮಸ್ಯೆ ಆಗಿದೆ. ಆಪರೇಷನ್ ಆಗಿತ್ತು.
ಅರ್ಜುನ್ ಸರ್ಜಾ ಅವರ ಕೇಸ್ನಲ್ಲಿ ಬೇಲ್ ತಗೊಳ್ಳೋಕೆ ನಾನು ವಾಪಸ್ ಬೆಂಗಳೂರಿಗೆ ಬಂದಿದ್ದೆ. ಆಗ ದಿನಕರ್ ತೂಗುದೀಪ ಭೇಟಿ ಆಗಿದ್ದೆ. ದರ್ಶನ್ ಆಗ ಬೇಲ್ನಿಂದ ಹೊರಗೆ ಬಂದಿದ್ರು. ಅದಾದ ಮೂರು ದಿನಗಳಲ್ಲಿ ನನಗೆ ಪ್ಯಾರಲೈಸ್ ಆಯ್ತು. ನಾನು ಸಾಲ ಮಾಡಿದ 23 ಜನಗಳ ಮನೆಗೆ ಹೋಗಿ ಬೇಡಿಕೊಂಡಿದ್ದೀನಿ.
ಸೆಕೆಂಡ್ ಇನ್ನಿಂಗ್ಸ್ ಆರಂಭಿಸೋಕೆ ಅವಕಾಶ ಕೊಡಿ ಅಂತಾ ಕೇಳಿಕೊಂಡೆ. ಅವರೆಲ್ಲರೂ ನನಗೊಂದು ಅವಕಾಶ ಕೊಟ್ರು. ದರ್ಶನ್ ಅವರ ಬಳಿ ಸಹಾಯ ಕೇಳಿದ್ದೆ. ಒಂದು ಕೋಟಿ ದುಡ್ಡು ಕೊಟ್ಟು ಕಳಿಸಿದ್ರು. ನಾನೇ ಅವರ ಹತ್ತಿರ ನನ್ನ ಸಾಲದ ಬಗ್ಗೆ ಹೇಳಿಕೊಂಡಿರಲಿಲ್ಲ. ನನ್ನ ಸ್ವಯಂ ಕೃತ ಅಪರಾಧಗಳಿಂದ ನಾನು ಹೀಗಾದೆ. ಯಾವ ದೇವರ ಮೇಲಾದ್ರೂ ಆಣೆ ಹಾಕ್ತೀನಿ. ದರ್ಶನ್ ಅವ್ರು ಒಳ್ಳೆಯವ್ರು.
ದರ್ಶನ್ ಅವರ ಬಳಿ ಸಹಾಯ ಕೇಳಿದ್ದೆ. ಒಂದು ಕೋಟಿ ದುಡ್ಡು ಕೊಟ್ಟು ಕಳಿಸಿದ್ರು. ನಾನೇ ಅವರ ಹತ್ತಿರ ನನ್ನ ಫುಲ್ ಸಾಲದ ಬಗ್ಗೆ ಹೇಳಿಕೊಂಡಿರಲಿಲ್ಲ. ಪ್ರೇಮ ಬರಹ ಕಂಪ್ಲೀಟ್ ಪ್ರಮೋಷನ್ ನಾನೇ ನೋಡಿಕೊಂಡೆ. ಅರ್ಜುನ್ ಸರ್ಜಾ ಅವ್ರ ಹತ್ತಿರ ಒಂದು ರೂಪಾಯಿ ಹಾಕಿಸಿಲ್ಲ. ಆ ಸಿನಿಮಾದಿಂದ 1 ಕೋಟಿ ಸಂಥಿಂಗ್ ಕಲೆಕ್ಷನ್ ಆಗಿತ್ತು. ಸಿನಿಮಾ ಓಡುತ್ತಿರುವಾಗಲೇ ನಾನು ಊರು ಬಿಟ್ಟಿದ್ದೆ.
ನಾನು ಅವರಿಗೆ 48 ಲಕ್ಷ ಕೊಡಬೇಕಿತ್ತು. ನಂತರದಲ್ಲಿ ಅರ್ಜುನ್ ಸರ್ಜಾ, ಧ್ರುವಾ ಸರ್ಜಾ ಭೇಟಿ ಆಗೋಕೆ ಕರೆದಿದ್ರು. ಅದರಲ್ಲಿ ಒಂದಷ್ಟು ಮಿಸ್ಟೇಕ್ ಆಗಿರೋ ಡೀಟೆಲ್ಸ್ ಇಟ್ಟುಕೊಂಡಿದ್ರು. ಆ ಲೆಕ್ಕಾಚಾರದಲ್ಲಿ ನನ್ ವ್ಯವಹಾರ ನೋಡಿಕೊಳ್ಳೊ ದೀಪಕ್ ತಪ್ಪು ಮಾಡಿದ್ರು. ಅದರಲ್ಲಿ ತಪ್ಪು ಮಾಡಿರೋದು ನಾನಲ್ಲ. ಅಲ್ಲದೇ ಹೆಚ್ಚು ಅಂತರವೂ ಇರಲಿಲ್ಲ. ಬಳಿಕ ದರ್ಶನ್ಗೆ ಈ ವಿಚಾರ ಹೇಳ್ತೀನಿ ಅಂದಿದ್ರು. ನಾನು ಬೇಡ ಸರ್ ಅಂದಿದ್ದೆ’ ಆಮೇಲೆ ನಾನು ಊರು ಬಿಟ್ಟೆ ಎಂದು ಹೇಳಿದ್ದಾರೆ
