‘ಜನನಾಯಗನ್’ ಸಿನಿಮಾ ಲೀಕ್: ವಿಜಯ್ ಪರ ನಿಂತ ತಮಿಳು ಇಂಡಸ್ಟ್ರಿ

ದಳಪತಿ ವಿಜಯ್ ನಟನೆಯ ಬಹುನಿರೀಕ್ಷೆಯ ಜನನಾಯಗನ್ ಸಿನಿಮಾವನ್ನು ಕಿಡಿಗೇಡಿಗಳು, ಬಿಡುಗಡೆಗೂ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಕೋಟಿಗಟ್ಟಲೇ ಬಂಡವಾಳ ಹಾಕಿ ಮಾಡಿರುವ ಸಿನಿಮಾ ಲೀಕ್ ಆಗಿರುವುದು ಚಿತ್ರತಂಡಕ್ಕೆ ದೊಡ್ಡ ನಷ್ಟ ಉಂಟು ಮಾಡಿದ್ದಾರೆ.

ಕನ್ನಡದ ದೊಡ್ಡ ನಿರ್ಮಾಣ ಸಂಸ್ಥೆ KVN ಸಂಸ್ಥೆ ನಿರ್ಮಾಣದಲ್ಲಿ ಮೂಡಿಬಂದಿರುವ ಸಿನಿಮಾ ಇದಾಗಿದ್ದು ಮೊದಲ ಬಾರಿಗೆ ತಮಿಳು ನಟ ವಿಜಯ್‌ಗೆ ಸಿನಿಮಾ ನಿರ್ಮಾಣ ಮಾಡಿದ್ದರು. ಆದರೀಗ ಮೊದಲ ಸಿನಿಮಾನೇ ಲೀಕ್ ಆಗಿರುವುದು ನಿರ್ಮಾಣ ಸಂಸ್ಥೆಗೆ ದೊಡ್ಡ ಶಾಕ್ ಆಗಿದೆ.

ಈ ವಿಚಾರವಾಗಿ ತಮಿಳು ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಇಂತಹ ಬೆಳವಣಿಗೆ ವಿರುದ್ಧ ಸ್ಟಾರ್ ಕಲಾವಿದರು ಕಿಡಿಕಾಡಿದ್ದಾರೆ. ತಮಿಳಿನ ದೊಡ್ಡ ದೊಡ್ಡ ಸ್ಟಾರ್‌ಗಳು ಸಿನಿಮಾ ಲೀಕ್ ಮಾಡಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಜಿನಿಕಾಂತ್, ಕಮಲ್ ಹಾಸನ್, ಸೂರ್ಯ, ಚಿರಂಜೀವಿ, ವಿಶಾಲ್ ಸೇರಿದಂತೆ ಹಲವು ಸೂಪರ್ ಸ್ಟಾರ್ಗಳು ಈ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ನಟ ವಿಜಯ್ ಪರವಾಗಿ ದನಿಗೂಡಿಸಿದ್ದಾರೆ.

ಮತ್ತೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಯಾರೇ ಸಿನಿಮಾವನ್ನು ಶೇರ್ ಮಾಡಿದ್ರು, ಫಾರ್ವರ್ಡ್ ಮಾಡಿದ್ರೂ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಕೆವಿಎನ್ ಪ್ರೊಡಕ್ಷನ್ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *