ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಸಿನಿಮಾ ರಿಲೀಸ್ ಆಗಿ 5 ದಿನಕ್ಕೆ ಭಾರತದಲ್ಲಿ 500 ಕೋಟಿ ರೂಪಾಯಿ ಗಳಿಸಿ ಗಮನ ಸೆಳೆದಿದೆ. ಧುರಂಧರ್ ಸಿನಿಮಾ ಭಾರತೀಯ ಗೂಢಾಚಾರಿ ಪಾಕ್ನಲ್ಲಿ ಹೇಗೆ ಕೆಲಸ ನಿರ್ವಹಿಸುತ್ತಾರೆ ಎನ್ನುವ ಬಗ್ಗೆ ಇದೆ. ಭಾರತೀಯ ಸ್ಪೈಗಳ ಕೆಲಸದ ಬಗ್ಗೆ ಈ ಸಿನಿಮಾದಲ್ಲಿ ತುಂಬಾ ಆಳವಾಗಿ ತೋರಿಸಲಾಗಿದೆ. ಈ ಸಿನಿಮಾ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗುತ್ತಿದ್ದಂತೆ ಪಾಕಿಸ್ತಾನದಲ್ಲಿ ಭಾರತೀಯ ಸ್ಪೈಗಳ ಬಗ್ಗೆ ಹುಡುಕಾಟ ನಡೆಸಲಾಗುತ್ತಿದೆ.
ಪಾಕ್ ಭದ್ರತಾ ಸಿಬ್ಬಂದಿಗಳು ಬೀದಿ ಬದಿಯಲ್ಲಿ ಮಲಗಿರೋ ಭಿಕ್ಷುಕರನ್ನು ಹಾಗೂ ಇತರರನ್ನು ಬಡಿದೆಬ್ಬಿಸಿ ವಿಚಾರಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆ ಬದಿಯಲ್ಲಿ ಮಲಗಿದವರ ಬ್ಲ್ಯಾಂಕೆಟ್ ತೆಗೆದು ಪ್ರಶ್ನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ‘ಧುರಂಧರ್ 2’ ಚಿತ್ರದ ಎಫೆಕ್ಟ್ ಎಂದು ಇದನ್ನು ಕರೆಯಲಾಗುತ್ತಾ ಇದೆ.
ಆದರೆ ಇದರ ಅಸಲಿಯತ್ತು ಬೇರೆಯದ್ದೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ವೈರಲ್ ಆಗಿರುವ ವಿಡಿಯೋಗಳು ತುಂಬಾ ಹಳೆಯದ್ದು. ಆಗಿನ್ನು ಧುರಂಧರ್ ಸಿನಿಮಾ ರಿಲೀಸ್ ಆಗಿರಲಿಲ್ಲ ಎನ್ನಲಾಗಿದೆ. ಪಾಕ್ ನ ಲ್ಯಾರಿ ಭಾಗದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆ ಇದು ಎನ್ನಲಾಗುತ್ತಿದೆ. ಆದರೆ ವಿಡಿಯೋಗಳು ಸಿನಿಮಾ ರಿಲೀಸ್ ಬಳಿಕ ವೈರಲ್ ಆಗುತ್ತಿರುವುದು ಅಚ್ಚರಿ ಮೂಡಿಸಿದೆ.
