ನಟಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಇತ್ತೀಚಿಗಷ್ಟೆ ಅದ್ದೂರಿಯಾಗಿ ದಾಂಪತ್ಯಕ್ಕೆ ಕಾಲಿಟ್ಟರು. ರಶ್ಮಿಕಾ ಮತ್ತು ವಿಜಯ್ ಮದುವೆಗೆ ಸಿನಿಮಾರಂಗದ ಅನೇಕ ಗಣ್ಯರು ಸಾಕ್ಷಿಯಾದರು. ಮದುವೆ ಮುಗಿದು ದಿನಗಳೇ ಕಳೆದ್ರು ಇನ್ನೂ ಸುದ್ದಿಯಾಗತ್ತಲೇ ಇದೆ. ದಿನಕ್ಕೊಂದು ಸುದ್ದಿ ರಶ್ಮಿಕಾ ಮತ್ತು ವಿಜಯ್ ಕಡೆಯಿಂದ ಬರ್ತಿದೆ.

ಮದುವೆಯಲ್ಲಿ ರಶ್ಮಿಕಾ ಮತ್ತು ವಿಜಯ್‌ಗೆ ಅನೇಕ ದುಬಾರಿ ಗಿಫ್ಟ್‌ಗಳು ಬಂದಿರುತ್ತವೆ. ಯಾರು ಏನ್ ಗಿಫ್ಟ್ ಕೊಟ್ರು ಎನ್ನುವ ಕುತೂಹಲ ಕೂಡ ಅಭಿಮಾನಿಗಳಲ್ಲಿ ಇದೆ. ಆದರೀಗ ರಶ್ಮಿಕಾ ಅವರ ಅತ್ತೆ ಅಂದರೆ ವಿಜಯ್ ದೇವರಕೊಂಡ ಅವರ ತಾಯಿ ತನ್ನ ಮುದ್ದಿನ ಸೊಸೆಗೆ ದುಬಾರಿ ಉಡುಗೊರೆ ನೀಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ಮದುವೆಗೂ ಮೊದಲೇ ಅಂದರೆ ನಿಶ್ಚಿತಾರ್ಥ ಸಂದರ್ಭದಲ್ಲಿಯೇ ವಿಜಯ್ ದೇವರಕೊಂಡ ತಾಯಿ ದುಬಾರಿ ಬೆಲೆಯ ರೋಸ್ ಕಟ್ ನೆಕ್ಲೆಸನ್ನು ಗಿಫ್ಟ್ ಆಗಿ ನೀಡಿದ್ದಾರೆ.. ಇದು ದುಬಾರಿ ಬೆಲೆಯ ನೆಕ್ಲೆಸ್ ಆಗಿದ್ದು, ಬರೋಬ್ಬರಿ 1000 ವರ್ಷಗಳ ಹಿಂದೆ ಚೋಳ ಸಾಮ್ರಾಜ್ಯ ಬಳಸಿದ್ದ ಡಿಸೈನನ್ನು ಈ ರೋಸ್ ಕಟ್ ನೆಕ್ಲೆಸ್ ಹೊಂದಿದೆ.. ಸಂಗೀತ ಹಾಗೂ ಮೆಹಂದಿ ಕಾರ್ಯಕ್ರಮಗಳಲ್ಲಿ ರಶ್ಮಿಕಾ ಈ ನೆಕ್ಲೆಸ್ ಅನ್ನೆ ಧರಿಸಿದ್ದರು. ರಶ್ಮಿಕಾ ಕೊರಳಲ್ಲಿರುವ ಈ ನೆಕ್ಲೆಸ್ ಎಲ್ಲರ ಗಮನ ಸೆಳೆಯುತ್ತಿದೆ..
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26 ರಂದು ಉದಯಪುರದಲ್ಲಿ ಅದ್ದೂರಿಯಾಗಿ ಮದುವೆಯಾದರು. ವಿವಾಹದ ಫೋಟೋಗಳನ್ನು ಈಗ ಹಂಚಿಕೊಳ್ಳುತ್ತಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಜ್ರ, ರತ್ನಗಳಿಂದ ಡಿಸೈನ್ ಮಾಡಿರುವ ನೆಕ್ಲೆಸ್ ಇದಾಗಿದ್ದು ಇದಕ್ಕೆ ಹೊಂದಿಕೊಳ್ಳುವ ಹಾಗೆ ಬಳೆ ಮತ್ತು ಕಿವಿಯೋಲೆಯನ್ನು ಡಿಸೈನ್ ಮಾಡಲಾಗಿತ್ತು.
