ಕಿರುತೆರೆ ನಟಿ ಸಂಜನಾ ಬುರ್ಲಿ ಅವರಿಗೆ ಮದುವೆ ಸಂಭ್ರಮ. ಇತ್ತೀಚಿಗಷ್ಟೆ ಸಮರ್ಥ್ ಚನ್ನಗಿರಿ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ಸಂಜನಾ ಇದೀಗ ಮದುವೆಯಾಗುತ್ತಿದ್ದಾರೆ. ಸದ್ಯ ವಿವಾಹ ಶಾಸ್ತ್ರಗಳು ಅದ್ದೂರಿಯಾಗಿ ನಡೆಯುತ್ತಿದೆ. ಅದಕ್ಕೂ ಮೊದಲ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಇದರ ವಿಡಿಯೋಗಳನ್ನು ಸಂಜನಾ ಬುರ್ಲಿ ಅವರ ಅಭಿಮಾನಿ ಬಳಗದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ.
ಸಂಜನಾ ಬುರ್ಲಿ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ ಹೆಸರಿನ ಪಾತ್ರದ ಮೂಲಕ ಗಮನ ಸೆಳೆದರು. ಈ ಧಾರಾವಾಹಿಯನ್ನು ಅವರು ಅರ್ಧಕ್ಕೆ ತೊರೆದರು. ಅವರು ಓದುವ ಉದ್ದೇಶದಿಂದ ಈ ಧಾರಾವಾಹಿ ತೊರೆದರು ಎನ್ನಲಾಗಿತ್ತು. ಆ ಬಳಿಕ ಸಂಜನಾ ಕಲರ್ಸ್ ಕನ್ನಡದ ‘ಶ್ರೀ ಗಂಧದಗುಡಿ’ ಧಾರಾವಾಹಿ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದರು. ಈ ಸೀರಿಯಲ್ ನಲ್ಲೂ ಸಂಜನಾ ಅಭಿಮಾನಿಗಳ ಗಮನ ಸೆಳೆದಿದ್ದರು. ಆದರೆ ಈ ಧಾರಾವಾಹಿಯನ್ನು ಸಂಜನಾ ಅರ್ಧಕ್ಕೆ ಬಿಟ್ಟಿದ್ದಾರೆ. ಇದಕ್ಕೆ ಕಾರಣ ವಿವಾಹ.
ಸಮರ್ಥ ಚೆನ್ನಗಿರಿ ಎಂಬುವವರ ಜೊತೆ ಸಂಜನಾ ಬುರ್ಲಿ ಮದುವೆ ಆಗುತ್ತಿದ್ದಾರೆ. ಇಂದು (ಮಾರ್ಚ್ 26) ಅವರ ವಿವಾಹ ನೆರವೇರಬಹುದು ಎಂದು ಊಹಿಸಲಾಗಿದೆ. ಅದಕ್ಕೂ ಮೊದಲು ಅಂದರೆ, ಮಾರ್ಚ್ 24ರಂದು ಸಂಜನಾ ಬುರ್ಲಿ ಅವರ ವಿವಾಹ ಆರತಕ್ಷತೆ ಅದ್ದೂರಿಯಾಗಿ ನೆರವೇರಿದೆ.
