ಕನ್ನಡದ ನಟಿ’ಶೇಕ್ ಇಟ್ ಪುಷ್ಪಾಪತಿ’ ಖ್ಯಾತಿಯ ನಿಮಿಕಾ ರತ್ನಾಕರ್ ಹಸೆಮಣೆ ಏರುತ್ತಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ನಿಮಿಕಾ ಮದುವೆ ನಿರ್ಧಾರ ಮಾಡಿದ್ದು ಸಧ್ಯದಲ್ಲೇ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ.
ನಿಮಿಕಾ, ಮುಂಬೈ ಮೂಲದ ಉದ್ಯಮಿಯನ್ನು ವರಿಸಲಿದ್ದಾರೆ. ಮುಂದಿನ ತಿಂಗಳು ಏಪ್ರಿಲ್ 6ಕ್ಕೆ ನಿಮಿಕಾ ಮದುವೆ ನಡೆಯಲಿದೆ. ಆದರೆ ಯಾವ ಸ್ಥಳ ಎನ್ನುವ ಮಾಹಿತಿ ಇನ್ನ ಬಹಿರಂಗವಾಗಿಲ್ಲ. ಮಂಗಳೂರು ಮೂಲದ ನಟಿ ನಿಮಿಕಾ ಮದುವೆ ಯಾವ ಸ್ಥಳದಲ್ಲಿ ನಡೆಯಲಿದೆ ಎನ್ನುವುದು ಬಹಿರಂಗಪಡಿಸಿಲ್ಲ.
ಮಾಡೆಲಿಂಗ್ ಕ್ರೇತ್ರದಲ್ಲಿ ಹೆಸರು ಮಾಡಿದ್ದ ನಿಮಿಕಾ ʻರಾಮಧಾನ್ಯʼವೆಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆ ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಅವರಿಗೆ ʻಕ್ರಾಂತಿʼ ಚಿತ್ರದ ʻಶೇಕ್ ಇಟ್ ಪುಷ್ಪವತಿʼ ಹಾಡು ಖ್ಯಾತಿ ತಂದುಕೊಟ್ಟಿತು. ʻವೈಲ್ಡ್ ಟೈಗರ್ ಸಫಾರಿʼ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ಈ ನಡುವೆ ನಿಮಿಕಾ ಕಡೆಯಿಂದೀಗ ಮದುವೆ ಸುದ್ದಿ ಹೊರಬಿದ್ದಿದೆ.
ನಿಮಿಕಾ ಮದುವೆಯಾಗುತ್ತಿರುವ ಹುಡುಗನ ಬಗ್ಗೆ ಹೆಚ್ಚು ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಸದ್ಯದಲ್ಲೇ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.
ಇತ್ತೀಚೆಗಷ್ಟೇ ನಿಮಿಕಾ ರತ್ನಾಕರ್ ಮುಂಬೈನ ಸಮಾರಂಭವೊಂದರಲ್ಲಿ ಕಾಣಿಸಿಕೊಂಡಿದ್ದರು. ಭಾರತೀಯ ಕ್ರಿಕೆಟ್ ಆಟಗಾರ ಪೃಥ್ವಿ ಷಾ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ನಿಮಿಕಾ ರತ್ನಾಕರ್ ಮಿಂಚಿದ್ದರು. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅದಕ್ಕಿಂತ ಹೆಚ್ಚಾಗಿ ಭಾರತದ ಮತ್ತೊಬ್ಬ ಯುವ ಆಟಗಾರ ಶ್ರೇಯಸ್ ಅಯ್ಯರ್ ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ವರ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ..
