ಕನ್ನಡದ ನಟಿ ಭಾವನಾ ರಾಮಣ್ಣ ಕಳೆದ ವರ್ಷ (2025) ಆಗಸ್ಟ್‌ನಲ್ಲಿ ಹೆಣ್ಣು ಮಗುವಿಗೆ ತಾಯಿಯಾಗಿದ್ದರು. ಇದೀಗ ತನ್ನ ಮುದ್ದು ಮಗಳ ನಾಮಕರಣ ಶಾಸ್ತ್ರವನ್ನ ಅತ್ಯಂತ ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾರೆ. ಮಗಳ ನಾಮಕರಣದ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಂದಹಾಗೆ ಮಗಳಿಗೆ ಹೆಸರೇನು ಇಟ್ಟಿದ್ದಾರೆ ಎನ್ನುವ ಕುತೂಹಲ ಕೂಡ ಅಭಿಮಾನಿಗಳಲ್ಲಿ ಇದೆ.
ನಟಿ ಭಾವನಾ ರಾಮಣ್ಣ ತಮ್ಮ ಮುದ್ದಾದ ಮಗಳಿಗೆ ‘ರುಕ್ಮಿಣಿ’ ಎಂದು ನಾಮಕರಣ ಮಾಡಿದ್ದಾರೆ. ಮಗು ಜನಿಸುವ ಮೊದಲೇ ಅಜ್ಜಿಯ ಹೆಸರಿಡಬೇಕೆಂದು ಭಾವನಾ ಮೊದಲೇ ನಿರ್ಧರಿಸಿದ್ದರು. ಅದರಂತೆ ಮಗಳಿಗೆ ಅಜ್ಜಿಯ ಹೆಸರಿಟ್ಟಿದ್ದಾರೆ. ಒಂದಷ್ಟು ಸಮಯ ಮಕ್ಕಳಿಗೆ ಸ್ಟೈಲಿಶ್ ಆಗಿ ಹೆಸರಿಡಬೇಕೆಂದು ತಲೆಕೆಡಿಸಿಕೊಳ್ಳುತ್ತಿದ್ದರು. ಆದರೀಗ ಮತ್ತೆ ಬಹುತೇಕರು ಹಳೆಯ ಕಾಲಕ್ಕೆ ಮರಳುತ್ತಿದ್ದಾರೆ. ಭಾವನಾ ಅವರು ತಮ್ಮ ಸಂಪ್ರದಾಯ ಮತ್ತು ಹಿರಿಯರ ಮೇಲಿನ ಗೌರವದಿಂದ ಅಜ್ಜಿಯ ಹೆಸರನ್ನು ಮಗಳಿಗೆ ಇಟ್ಟಿದ್ದಾರೆ.
ಅಂದಹಾಗೆ ಭಾವನಾ ಮದುವೆಯಾದೆ IVF ಮೂಲಕ ಮಗುವಿಗೆ ಜನ್ಮ ನೀಡಿದ್ದಾರೆ. ಅವಳಿ ಮಕ್ಕಳು ಎಂದು ಹೇಳಿಕೊಂಡಿದ್ದರು. ಆದರಂತೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ದುರದೃಷ್ಟವಶಾತ್ ಒಂದು ಮಗುವನ್ನು ಕಳೆದುಕೊಂಡರು. ಇದೀಗ ಮುದ್ದಾದ ಮಗಳ ಆರೈಕೆಯ ಖುಷಿಯಲ್ಲಿ ಸಮಯ ಕಳೆಯುತ್ತಿದ್ದಾರೆ.
ಸಿನಿಮಾಗಳಿಂದನೂ ಅಂತರ ಕಾಯ್ದುಕೊಂಡಿದ್ದ ಭಾವನಾ ಕೆಲವು ಸಮಯ ಧಾರಾವಾಹಿಗಳಲ್ಲಿ ನಟಿಸಿದರು. ಬಳಿಕ ಧಾರಾವಾಹಿ ಕ್ಷೇತ್ರದಿಂದನೂ ದೂರ ಉಳಿದರು. ಅಭಿನಯದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದ ಭಾವನಾ ಇದೀಗ ಮಗಳನ್ನು ನೋಡಿಕೊಂಡು ಮಗಳ ಜೊತೆ ಸಮಯ ಕಳೆಯುತ್ತಿದ್ದಾರೆ.
