ಬಿಗ್ ಬಾಸ್ ಸೀಸನ್ 12 ವಿನ್ನರ್ ಗಿಲ್ಲಿ ನಟನಿಗೆ ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿದ ಪ್ರೀತಿ, ಅಪಾರ ಜನಪ್ರಿಯತೆ ಸಿಕ್ಕಿದೆ. ಎಲ್ಲೇ ಹೋದರು ಅಭಿಮಾನಿಗಳು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ, ಗಿಲ್ಲಿ ನೋಡಲು ಮುಗಿಬೀಳುತ್ತಾರೆ. ರಿಯಾಲಿಟಿ ಶೋ ಮತ್ತು ಬಿಗ್ ಬಾಸ್ ಮೂಲಕ ಈ ಮಟ್ಟದ ಖ್ಯಾತಿ ಗಳಿಸಿರುವ ಗಿಲ್ಲಿ ಮುಂದೇನು ಮಾಡ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.
ಗಿಲ್ಲಿ ಸಿನಿಮಾ ಹಾದಿ ಹೇಗಿರಲಿದೆ ಅನ್ನೋದು ಎಲ್ಲರ ಪ್ರಶ್ನೆಯಾಗಿತ್ತು. ಅದಕ್ಕೀಗ ದೊಡ್ಡ ಸಿಗ್ನಲ್ ಕೊಟ್ಟಿದ್ದಾರೆ ಗಿಲ್ಲಿ ನಟ. ಮೂಲಗಳ ಪ್ರಕಾರ ಗಿಲ್ಲಿ ನಟನಿಗೆ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ತಾವು ನಟಿಸಬೇಕಿದ್ದ ಕಿರಾತಕ 2 ಸಿನಿಮಾಗೆ ಗಿಲ್ಲಿ ನಟನನ್ನು ಹೀರೋ ಮಾಡಲು ಯಶ್ ಮುಂದಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಮಾನ್ಸ್ಟರ್ ಮೈಂಡ್ಸ್ ಪ್ರೊಡಕ್ಷನ್ ಗಿಲ್ಲಿಗೆ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದೆ ಎನ್ನಲಾದಿ.
ಇದೇ ಕಾರಣಕ್ಕೆ ಗಿಲ್ಲಿ ನಟ ಈಗಾಗಲೇ ಭರ್ಜರಿ ತಯಾರಿ ನಡೆಸಿದ್ದಾರೆ. ವರ್ಕ್ ಔಟ್ ಶುರು ಮಾಡಿದ್ದು ಜಿಮ್ ನಲ್ಲಿ ಬೆವರಿಳಿಸುತ್ತಿರುವ ವಿಡಿಯೋ ಗಮನ ಸೆಳೆಯುತ್ತಿದೆ. ಜೊತೆಗೆ ಹೇರ್ ಸ್ಟೈಲಿಸ್ಟ್ ಚಂದ್ರು ಅವರ ಬಳಿ ಹೊಸ ಹೇರ್ ಸ್ಟೈಲ್ ಮಾಡಿಕೊಂಡು ಮಿಂಚುತ್ತಿದ್ದಾರೆ. ಇದೆಲ್ಲವು ಗಿಲ್ಲಿ ಹೊಸ ಸಿನಿಮಾಗೆ ಮಾಡುತ್ತಿರು ತಯಾರಿ ಎನ್ನಲಾಗಿದೆ.
ಯಶ್ ಜೊತೆಗೆ ಮತ್ತೊಂದು ದೊಡ್ಡ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಕೂಡ ಕೈ ಜೋಡಿಸಲಿದೆ ಎನ್ನಲಾಗಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಅಥವ ಗಿಲ್ಲಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
