ತೆಲುಗು ಮೂಲದ ಖ್ಯಾತ ಗಾಯಕಿ ಮಂಗ್ಲಿ ಕೋಟಿ ಕೋಟಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು ಕೇಸ್ ದಾಖಲಾಗಿದೆ. ಹಣ ಕೇಳಿದ್ರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ವಕೀಲರೊಬ್ಬರು ಗಂಭೀರ ಆರೋಪ ಮಾಡಿದ್ದಾರೆತೆಲುಗು ಮಲದವರಾದರೂ ಮಂಗ್ಲಿ ಕನ್ನಡದಲ್ಲೂ ತುಂಬಾ ಫೇಮಸ್. ಕನ್ನಡದಲ್ಲೂ ಹಾಡುಗಳನ್ನು ಹೇಳಿದ್ದಾರೆ. ಅವರು ತಮ್ಮ ಕಂಚಿನ ಕಂಠದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಈ ಗಾಯಕಿ ಹಾಗೂ ಅವರ ಸಹೋದರನ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮಂಗ್ಲಿ ತಮಗೆ ಮೋಸ ಮಾಡಿದ್ದಾರೆ ಮತ್ತು ಅವರಿಂದ ಅಪಾಯವಿದೆ ಎಂದು ವಕೀಲರೊಬ್ಬರು ಆರೋಪಿಸಿದ್ದಾರೆ.
ಅವರ ದೂರಿನ ಆಧಾರದ ಮೇಲೆ, ಪೊಲೀಸರು ಮಂಗ್ಲಿ, ಅವರ ಸಹೋದರ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 351 (2), 352 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಂಗ್ಲಿ ಮೈಕ್ರೋ ಫೈನಾನ್ಸ್ ಮಾಡುತ್ತಿದ್ದರು ಎನ್ನಲಾಗಿದೆ. ಮಂಗ್ಲಿ, ಅವರ ಸಹೋದರ ಇದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರು ಸುಮಾರು 100 ಜನರಿಂದ ಭಾರಿ ಹಣವನ್ನು ಸಂಗ್ರಹಿಸಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂಬ ಆಸೆ ತೋರಿಸಿ ನಂಬಿಸಿದ್ದಾರೆ. ನಂಬಿ ಅನೇಕರು ಹಣ ನೀಡಿದ್ದರು. ಇದೀಗ ಮಂಗ್ಲಿ ಕಡೆಯಿಂದ ಸುಮಾರು 10 ಕೋಟಿ ರೂಪಾಯಿ ಮೋಸ ಆಗಿದೆ ಎನ್ನಲಾಗಿದೆ.
ನಿಗದಪಡಿಸಿದ ಸಮಯ ಮೀರಿದರು ಲಾಭ ನೀಡಿಲ್ಲ, ಲಾಭ ಇರಲಿ ಕೊಟ್ಟ ಅಸಲನ್ನು ಸಹ ಕೂಡ ಕೊಟ್ಟಿಲ್ಲ ಎಂದು ಅನೇಕರು ಆರೋಪಿಸಿದ್ದಾರೆ. ಸಂತ್ರಸ್ತರು ವಕೀಲ ಸುಬ್ಬರಾವ್ ಅವರ ಸಂಪರ್ಕಿಸಿ ಸಹಾಯ ಕೇಳಿದಾಗ ಅವರು ಹಣ ಕೊಡುವಂತೆ ಕೇಳಿದಾಗ ಮಂಗ್ಲಿ ಮತ್ತು ಆಕೆಯ ಸಹೋದರ ಶಿವ ವಕೀಲರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
