ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಆಟಗಾರರಲ್ಲಿ ಒಬ್ಬರಾಗಿರುವ ಹಾರ್ದಿಕ್ ಪಾಂಡ್ಯ ವಿರುದ್ದ ಪುಣೆಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎನ್ನುವ ಕಾರಣಕ್ಕೆ ದೂರು ನೀಡಲಾಗಿದೆ.

ಗುಜರಾತ್ ಅಹಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಗೆದ್ದು ವಿಶ್ವ ಚಾಂಪಿಯನ್ ಆದ ನಂತರ, ಟೀಂ ಇಂಡಿಯಾದ ಸದಸ್ಯರು ವಿಜಯೋತ್ಸವ ಆಚರಿಸಿಕೊಂಡಿದ್ದರು. ಆ ವೇಳೆ, ಹಾರ್ದಿಕ್ ಪಾಂಡ್ಯ, ರಾಷ್ಟ್ರಧ್ವಜವನ್ನು ಮೈಮೇಲೆ ಸುತ್ತಿಕೊಂಡು, ಗ್ರೌಂಡ್ ಫುಲ್ ಓಡಾಡಿದ್ದರು. ಈ ಸಂಬಂಧ, ಅವರ ವಿರುದ್ದ ದೂರು ದಾಖಲಾಗಿದೆ.

ವಕೀಲ ವಾಜಿದ್ ಖಾನ್ ಎನ್ನುವರು ನೀಡಿರುವ ದೂರಿನಲ್ಲಿ, ಕ್ರಿಕೆಟರ್ ಹಾರ್ದಿಕ್ ಪಾಂಡ್ಯ, ರಾಷ್ಟ್ರಧ್ವಜವನ್ನು ಮೈಮೇಲೆ ಸುತ್ತಿಕೊಂಡು, ಮೈದಾನದಲ್ಲಿ ಗರ್ಲ್ ಫ್ರೆಂಡ್ ಜೂತೆ ಶ್ಲೀಲವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದು ಪ್ರತೀ ಭಾರತೀಯರ ಕರ್ತವ್ಯ ಎಂದು ದೂರಿನಲ್ಲಿ ಹೇಳಲಾಗಿದೆ. ಪಾಂಡ್ಯ, ರಾಷ್ಟ್ರಧ್ವಜವನ್ನು ಮೈಮೇಲೆ ಸುತ್ತಿಕೊಂಡಿದ್ದಾಗ, ಅವರ ಗೆಳತಿಯೊಬ್ಬರು ಅವರಿಗೆ ಮುತ್ತಿಡುವ ದೃಶ್ಯ ವೈರಲ್ ಆಗಿತ್ತು.
