TV9 Education Expo 2026: ಟಿವಿ9 ಎಜುಕೇಶನ್ ಎಕ್ಸ್‌ಪೋ ಉದ್ಘಾಟಿಸಿದ ಜೋಗಿ ಪ್ರೇಮ್, ರೀಷ್ಮಾ ನಾಣಯ್ಯ 

 

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳಲು ಇದೊಂದು ಸುವರ್ಣಾವಕಾಶ. ಒಂದೇ ವೇದಿಕೆಯಲ್ಲಿ ರಾಜ್ಯ ಹಾಗೂ ದೇಶದ ಅಗ್ರಗಣ್ಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ತಜ್ಞರಿಂದ ಇಲ್ಲಿ ಉತ್ತಮ ಮಾಹಿತಿ ಸಿಗಲಿದೆ.

ಅದಕ್ಕಿಂತ ಮುಖ್ಯವಾಗಿ, ಆಯಾ ಕಾಲೇಜುಗಳ ಪ್ರತಿನಿಧಿಗಳೊಂದಿಗೆ ನೇರವಾಗಿ ಸಂವಾದ ಮಾಡಿ, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮಾಹಿತಿ ಪಡೆಯುವುದಲ್ಲದೇ ಅವರು ಸೇರುವ ಕೋರ್ಸ್‌ಗಳು ಹಾಗೂ ಪ್ರವೇಶ ಪ್ರಕ್ರಿಯೆ ಬಗ್ಗೆಯೂ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.

 

ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಈ ಎಕ್ಸ್ ಪೋವನ್ನ ಸಚಿವರಾದ ಸಂತೋಷ್ ಲಾಡ್ ಹಾಗೂ ಖ್ಯಾತ ನಿರ್ದೇಶಕ ಜೋಗಿ ಪ್ರೇಮ್, ನಟಿ ರೀಷ್ಮಾ ನಾಣಯ್ಯ ಉದ್ಘಾಟಿಸಿ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶುಭ ಹಾರೈಸಿದರು. ಟಿವಿನೈನ್ ಎಜುಕೇಶನ್ ಎಕ್ಸ್ ಪೋ 2026 ಗೆ ಶುಭ ಕೋರಿದರು.

 

ಏಪ್ರಿಲ್ 10, 11 ಮತ್ತು 12 ರಂದು ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ತ್ರಿಪುರವಾಸಿನಿ, ಪ್ಯಾಲೇಸ್ ಗ್ರೌಂಡ್, ಬೆಂಗಳೂರಿನಲ್ಲಿ ಈ ಎಕ್ಸ್ ಪೋ ನಡೆಯಲಿದೆ ಮತ್ತು ಪ್ರವೇಶ ಉಚಿತವಿದೆ.

Leave a Reply

Your email address will not be published. Required fields are marked *