ಬಾಲಿವುಡ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಧುರಂಧರ್-2 ಸಿನಿಮಾ ಬಗ್ಗೆಯೇ ಮಾತು. ಸಿನಿಮಾ ನೋಡಿ ಅನೇಕರು ಹೊಗಳುತ್ತಿದ್ದರೆ ಇನ್ನು ಕೆಲವರು ಟೀಕಿಸುತ್ತಿದ್ದಾರೆ. ಪರ-ವಿರೋಧ ಚರ್ಚೆಗಳ ನಡುವೆಯೂ ಧುರಂಧರ್-2 ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಧುರಂಧರ್-2 ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದರೂ, ರಣ್ವೀರ್ ಸಿಂಗ್ ಅಭಿನಯದ ಬಗ್ಗೆ ಎಲ್ಲಾ ಕಡೆಯಿಂದ ಹೊಗಳಿಕೆಯ ಸುರಿಮಳೆ ಬರುತ್ತಿದ್ದರು ಪತ್ನಿ ದೀಪಕಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅನೇಕರು ಟೀಕಿಸುತ್ತಿದ್ದಾರೆ. ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಹೇಳಿಕೆ ನೀಡಿಲ್ಲ, ಈ ಮೌನ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.
ವಿವಾದ, ಟೀಕೆಗಳ ನಡುವೆಯೂ ದೀಪಿಕಾ ಪತಿ ರಣ್ವೀರ್ ಸಿಂಗ್ ಜೊತೆ ಫಿಶ್ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಮೀನೂಟ ಸವಿಯಲು ಬಂದ ವಿಡಿಯೋ ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿದೆ. ಧರಂಧರ್-2 ಸಕ್ಸಸ್‌ನ ಖುಷಿಲ್ಲಿರುವ ರಣ್ವೀರ್ ಸಿಂಗ್ ಪತ್ನಿಯ ಇಷ್ಟದ ಮೀನೂಟದ ಹೋಟೆಲ್‌ಗೆ ಕರೆದುಕೊಂಡು ಬಂದಿದ್ದಾರೆ.
ಹಂಜ ತನ್ನ ರಿಯಲ್ ಎಲಿನಾ ಜೊತೆ ಊಟದ ಡೇಟ್ ಗೆ ಬಂದಿರುವ ವಿಚಾರ ಗೊತ್ತಾಗಿ ಅಭಿಮಾನಿಗಳು ಜಮಾಯಿಸಿದ್ದರು. ಅಭಿಮಾನಿಗಳತ್ತ ಕೈ ಬೀಸುತ್ತಾ ಅಲ್ಲಿಂದ ಹೊರಟರು. ಅಭಿಮಾನಿಗಳು ರಣವೀರ್ ಮುಂದೆ ‘ಬಬ್ಬರ್ ಶೇರ್’ ಎಂದು ಘೋಷಣೆ ಕೂಗಿದರು. ಅಭಿಮಾಮಿಗಳ ಪ್ರೀತಿಯನ್ನು ಕಣ್ತುಂಬಿಕೊಂಡು ಅಲ್ಲಿಂದ ಹೊರಟರು. ಈ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ.
