ದಕ್ಷಿಣ ಭಾರತದ ದಂತಕಥೆ ಎನಿಸಿರುವ ಚಕ್ರವರ್ತಿ ಇಮ್ಮಡಿ ಪುಲಕೇಶಿ ಜೀವನಾಧಾರಿತ ಸಿನಿಮಾ ಸೆಟ್ಟೇರಿದೆ. ಆ ದಿನಗಳು ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶನದಲ್ಲಿಇಮ್ಮಡಿ ಪುಲಕೇಶಿ ಬಗ್ಗೆ ಸಿನಿಮಾ ಬರುತ್ತಿರುವುದು ಕನ್ನಡ ಸಿನಿಮಾ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
ಸದ್ಯ ಸಿನಿಮಾ ಅನೌನ್ಸ್ ಮಾಡಲಾಗಿದೆ. ಚಿತ್ರೀಕರಣ ಇಷ್ಟರಲ್ಲೇ ಶುರುವಾಗಲಿದೆ. ಈ ಸಿನಿಮಾಗೆ ಈಗಾಗಲೇ ‘ಎರೆಯ’ ಅಂತ ಟೈಟಲ್ ಇಡಲಾಗಿದೆ. ಕನ್ನಡ, ಹಿಂದಿ, ತಮಿಳು, ಸೇರಿದಂತೆ ದೇಶದ ಪ್ರಮುಖ ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದೆ. ಇಷ್ಟರಲ್ಲೇ ಸಿನಿಮಾದ ಕಲಾವಿದರು, ತಂತ್ರಜ್ಞರು ತಂಡವನ್ನು ಚಿತ್ರತಂಡ ಪರಿಚಯಿಸಲಿದ್ದು, ದೊಡ್ಡ ಮಟ್ಟದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇಮ್ಮಡಿ ಪುಲಕೇಶಿಯಾಗಿ ಕನ್ನಡದ ಯಾವ ಸ್ಟಾರ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಈಗಾಗಲೇ ಹೆಚ್ಚಾಗಿದೆ. ದೊಡ್ಡ ಮಟ್ಟದಲ್ಲಿ ಮೂಡಿಬರುತ್ತಿರುವ ಕಾರಣ ಉಳಿದ ಕಲಾವಿದರು ಯಾರೆಲ್ಲ ಇರಲಿದ್ದಾರೆ ಎನ್ನುವುದು ಕುತೂಹಲವಾಗಿದೆ. ಸದ್ಯದಲ್ಲೇ ಈ ಎಲ್ಲಾ ಕುತೂಹಲ ಕಾತರಗಳಿಗೆ ತೆರೆಳೆಯಲಿದೆ ಸಿನಿಮಾತಂಡ.
