ವಿಪರೀತ ಸಾಲ, ಇಡೀ ಕುಟುಂಬ ಸಾಯಲು ನಿರ್ಧರಿಸಿದ್ವಿ: ಮಲ್ಲಿಕಾರ್ಜುನ್

ಸಿನಿಮಾಗಳ ಸೋಲಿನಿಂದ, ವಿಪರೀತ ಸಾಲ ಮಾಡಿಕೊಂಡಿದ್ದೆ. ಸಾಲು ತೀರಿಸಲು ಸಾಧ್ಯವಾಗಿಲ್ಲ. ದರ್ಶನ್ ಅವರು ನನಗೆ ಸಹಾಯ ಮಾಡಿದ್ದರು. ಆದರೂ ನನ್ನ ಸಾಲದ ಹೊರೆಯಿಂದ ನಾನು ಊರು ಬಿಡಬೇಕಾಯಿತು. ಸಾಲ ಮಾಡಿದ್ದು ತನ್ನ ಹೆಂಡತಿಗೂ ಗೊತ್ತಿರಲಿಲ್ಲ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.

‘ನನ್ನ ಹೆಂಡ್ತಿ ಮುಗ್ಧೆ. ನಾನು ಸಾಲ ಮಾಡಿದ್ದು ಅವಳಿಗೆ ಗೊತ್ತಿರಲಿಲ್ಲ. ಸುಮಾರು 8 ಕೋಟಿ ಸಾಲ ಮಾಡಿದ್ದೆ ಎಂದು ಹೇಳಿದ್ದಾರೆ. ಅವಳು ಭಯ ಬಿದ್ದಿದ್ದಳು. ನಾನು ಮಿಡಲ್ ಕ್ಲಾಸ್ ಜನ. ಇಷ್ಟು ಸಾಲ ತೀರಿಸೋದು ಹೇಗೆ. ಇಬ್ಬರು ಸಾಯೋನ ಅಂದಿದ್ಲು. ಅವಳಿಗೆ ಭಯ ಇರಲಿಲ್ಲ ಆದರೆ ನನಗೆ ಸಾವಿನ ಭಯ ಇತ್ತು. ಮಗನೂ ಇದ್ದಿದ್ದರಿಂದ ನನಗೆ ಸಾಯೋ ಆಸೆ ಇರಲಿಲ್ಲ. ಈ ಮಧ್ಯೆ ನನ್ನ ಭಾಮೈದ ಮದುವೆ ಇದ್ದಿದ್ದರಿಂದ. ನಮ್ಮ ಆತ್ಮಹತ್ಯೆ ಮಾಡಿಕೊಳ್ಳೋ ನಿರ್ಧಾರ ಪೋಸ್ಟ್ ಪೋನ್ಡ್ ಮಾಡಿದ್ವಿ.

ನಮ್ಮ ಸಾಲದ ವಿಚಾರ, ಸಾಯೋ ವಿಚಾರ. ಯಾರಿಗೋ ಗೊತ್ತಾಗಿತ್ತು. ಆ ಶಕ್ತಿಯಿಂದ ನಾವು ಸಾಯೋ ನಿರ್ಧಾರ ದೂರ ಹಾಕಿದ್ವಿ. ನನ್ನ ಹೆಂಡತಿಗೆ ಹೇಳಿ, ನಾನು ಊರು ಬಿಟ್ಟಿದ್ದೆ. ನಾನು ಸಾಯಲ್ಲ, ಎಲ್ಲಿಗೆ ಹೋಗ್ತಿದ್ದೀನಿ ಅಂತ ನಿನಗೂ ಹೇಳಲ್ಲ ಅಂತಾ ಹೊರಟು ಬಿಟ್ಟೆ.

ಊರು ಬಿಡೋಕು ಮೊದಲೇ ಎಲ್ಲರಿಗೂ ಸುಮಾರು 23 ಜನಕ್ಕೆ. ಸಾಲ ಮಾಡಿದರಿಗೆ ನಾನು ಮೆಸೇಜ್ ಹಾಕಿದ್ದೆ. ಕಷ್ಟದಲ್ಲಿ ಇದೀನಿ ನಿಮ್ಮ ಸಾಲ ತೀರಿಸ್ತೀನಿ. ಟೈಂ ಕೊಡಿ ಅಂತಾ ಮೆಸೇಜ್ ಹಾಕಿ. ನನ್ನ ಸಿಮ್ ಕುಂದಾಪುರದ ಹೊಳೆ ಬೀಸಾಕಿ ಹೊರಟೆ’ ಎಂದು ಕಣ್ಮರೆಯಾಗಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ.

Leave a Reply

Your email address will not be published. Required fields are marked *