ಧುರಂಧರ್ ದಿ ರಿವೇಂಜ್, ಈಗ ಎಲ್ಲಿ ನೋಡಿದ್ರು ಧುರಂಧರ್ 2 ಸಿನಿಮಾದ್ದೆ ಸದ್ದು. ಭಾರತೀಯ ಸಿನಿಮಾರಂಗದಲ್ಲಿ ಸದ್ಯ ಧುರಂಧರ್-2 ಸಿನಿಮಾದ್ದೆ ಹವಾ. ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿತ್ತು. ಹಾಗಾಗಿ ಪಾರ್ಟ್-2 ಮೇಲೂ ನಿರೀಕ್ಷೆ ದೊಡ್ಡ ಮಟ್ಟದಲ್ಲಿತ್ತು. ಅದರಂತೆ ಧುರಂಧರ್-2 ಮೊದಲ ದಿನ ಕೋಟಿ ಕೋಟಿ ಬಾಚಿಕೊಂಡಿದೆ.
ದೇಶಾದಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ನಿರೀಕ್ಷೆಗೂ ಮೀರಿದ ದೊಡ್ಡ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾಗೆ ಸಿಗುತ್ತಿರೋ ಪಾಸಿಟಿವ್ ರೆಸ್ಪಾನ್ಸ್ ನೋಡಿ, ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಎಷ್ಟಿರಬಹುದು ಎನ್ನುವ ಕುತೂಹಲ ಸಹ ಎಲ್ಲರಲ್ಲಿದೆ. ಅದಕ್ಕೀಗ ಉತ್ತರ ಸಿಕ್ಕಿದೆ..
ಸಿನಿ ವಿಶ್ಲೇಷಕರ ಪ್ರಕಾರ ಧುರಂಧರ್-2 ಮೊದಲ ದಿನ 145 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗಿದೆ. ಇದು ಕೇವಲ ಭಾರತದ ಕಲೆಕ್ಷನ್ ಮಾತ್ರವಲ್ಲದ. ದೇಶ-ವಿದೇಶಗಳಲ್ಲಿನ ಒಟ್ಟು ಕಲೆಕ್ಷನ್ ಎನ್ನಲಾಗಿದೆ.
ಅಂದಹಾಗೆ ಧುರಂಧರ್-2 ಪ್ರಪಂಚದಾದ್ಯಂತ ಬರೋಬ್ಬರಿ 21,728 ಶೋಗಳು ಮೊದಲ ದಿನ ಪ್ರದರ್ಶನ ಕಂಡಿದೆ. ದಾಖಲೆಯ ಮಟ್ಟದಲ್ಲಿ ಟಿಕೆಟ್ ಸೇಲ್ ಆಗಿತ್ತು. ಟಿಕೆಟ್ ಸೇಲ್ ಆಗಿರೋ ಲೆಕ್ಕಾಚಾರದ ಪ್ರಕಾರ ಬರೋಬ್ಬರಿ 145 ಕೋಟಿ ರೂಪಾಯಿ ಫಸ್ಟ್ ಡೇ ಕಲೆಕ್ಷನ್ ಮಾಡಿದೆ. ಇದು ದಾಖಲೆಯ ಓಪನಿಂಗ್ ಆಗಿದೆ.
ಧುರಂಧರ್, ಆದಿತ್ಯ ಧರ್ ನಿರ್ದೇಶನದಲ್ಲಿ ಮೂಡಿಬಂದಿದ್ದು ರಣ್ವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೇಜರ್ ಮೋಹಿತ್ ಶರ್ಮಾ ಅವರ ಜೀವನಾಧಾರಿತ ಸಿನಿಮಾವಾಗಿದೆ. ರಣ್ವೀರ್ ಸಿಂಗ್, ಮೋಹಿತ್ ಶರ್ಮಾ ಪಾತ್ರದಲ್ಲಿ ಮಿಂಚಿದ್ದಾರೆ.
